Veer Savarkar's 141st Birth Anniversary in RVK CBSE Schools
May 28: Veer Savarkar’s 141st Birth Anniversary was celebrated with devotion in Rashtrotthana Vidya Kendra CBSE Schools across Karnataka State.
ಮೇ 28: ವೀರ ಸಾವರ್ಕರ್ ಅವರ 141ನೇ ಜಯಂತಿಯನ್ನು ಕರ್ನಾಟಕ ರಾಜ್ಯಾದ್ಯಂತ ಇರುವ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್ಇ ಶಾಲೆಗಳಲ್ಲಿ ಶ್ರದ್ಧಾಭಕ್ತಿಗಳಿಂದ ಆಚರಿಸಲಾಯಿತು.
ಕಡಲ ನೀರ ಈಜಿ ಬಂದ ಬಂಟ ಸಾವರ್ಕರ್
ರಾಷ್ಟ್ರ ಭಕ್ತ ಧಿಂಗ್ರನ ಧ್ಯೇಯ ಸಾವರ್ಕರ್
ನಾಡ ಮುಂದೆ ಸಾವು ಸಣ್ಣದೆಂದ ಸಾವರ್ಕರ್
ವಿನಾಯಕ ದಾಮೋದರ ವೀರ ಸಾವರ್ಕರ್…
Vinayaka Damodar Savarkar, a symbol of self-respect, a visionary of Hinduism, a social reformer, a visionary leader, a revolutionary, a freedom fighter who had freedom in his blood, as well as an author, historian, poet, philosopher, was born on 28th May 1883 in Bhagrur, Nashik district of Maharashtra.
ಸ್ವಾಭಿಮಾನದ ಪ್ರತೀಕ, ಹಿಂದುತ್ವದ ದಾರ್ಶನಿಕ, ಸಮಾಜ ಸುಧಾರಕ, ದೂರದೃಷ್ಟಿಯ ನೇತಾರ, ಸ್ವಾತಂತ್ರ್ಯ ಅನ್ನುವುದನ್ನು ತನ್ನ ರಕ್ತದ ಕಣಕಣದಲ್ಲೇ ಬೆರೆಸಿಕೊಂಡ ಕ್ರಾಂತಿಕಾರಿ, ಸ್ವಾತಂತ್ರ್ಯ ಹೋರಾಟಗಾರ ಅಷ್ಟೇ ಅಲ್ಲದೇ ಲೇಖಕ, ಇತಿಹಾಸಕಾರ, ಕವಿ, ತತ್ತ್ವಶಾಸ್ತ್ರಜ್ಞರಾದ ವಿನಾಯಕ ದಾಮೋದರ ಸಾವರ್ಕರ್ ಅವರು 28 ಮೇ 1883ರಲ್ಲಿ ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ಭಗ್ರೂರ್-ನಲ್ಲಿ ಜನಿಸಿದರು.