10th International Day of Yoga celebration 14 RVK CBSE Schools
June 21: A total of 10,447 Students and 770 Teachers from 14 Rashtrotthana Vidya Kendra CBSE Schools across Karnataka, participated in the celebrations of the 10th International Yoga Day. Within a few months of becoming the Prime Minister of India for the first time, Modiji mentioned the importance of Yoga in his first speech at the United Nations on 27th Sept 2014 and proposed to make June 21st the International Day of Yoga. As a record, 177 countries agreed to celebrate the first International Day of Yoga in 2015. With the same inspiration, the 10th celebration was also done on this day.
ಜೂನ್ 21: ಕರ್ನಾಟಕ ರಾಜ್ಯಾದ್ಯಂತ ಇರುವ 14 ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿಬಿಎಸ್ಇ ಶಾಲೆಗಳಲ್ಲಿ ಒಟ್ಟು 10,447 ವಿದ್ಯಾರ್ಥಿಗಳು ಹಾಗೂ 770 ಶಿಕ್ಷಕ ವೃಂದದವರು 10ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಸಂಭ್ರಮ-ಸಡಗರಗಳಲ್ಲಿ ಪಾಲ್ಗೊಂಡಿದ್ದರು.ಮೋದಿಯವರು ಮೊದಲ ಬಾರಿಗೆ ಭಾರತದ ಪ್ರಧಾನಿಗಳಾದ ಕೆಲವೇ ತಿಂಗಳುಗಳಲ್ಲಿ, 27 ಸಪ್ಟೆಂಬರ್ 2014ರಂದು ವಿಶ್ವಸಂಸ್ಥೆಯಲ್ಲಿ ಮಾಡಿದ ಮೊದಲ ಭಾಷಣದಲ್ಲಿ ಯೋಗದ ಮಹತ್ವವನ್ನು ಉಲ್ಲೇಖಿಸುತ್ತಾ ಜೂನ್ 21ನ್ನು ಅಂತಾರಾಷ್ಟ್ರೀಯ ಯೋಗ ದಿನವಾಗಿಸುವ ಬಗೆಗೆ ಪ್ರಸ್ತಾಪಿಸಿ, ದಾಖಲೆ ಎಂಬಂತೆ 177 ರಾಷ್ಟ್ರಗಳ ಸಮ್ಮತಿಯನ್ನೂ ಪಡೆದು, 2015ರಲ್ಲೇ ಮೊದಲ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸುವಂತಾಯಿತು. ಅದೇ ಸ್ಫೂರ್ತಿಯಲ್ಲಿ ಈ ದಿನ 10ನೇ ಆಚರಣೆಯನ್ನೂ ಮಾಡಲಾಯಿತು.