RVK North Cluster Teacher Boot Camp inaugurated in RVK - HB Halli

May 13: Teacher Boot Camp for the teachers of RVK North Cluster was inaugurated in Rashtrotthana Vidya Kendra – Hagaribommanahalli. Camp is scheduled for 5 days and concludes on May 18th.

ಮೇ 13: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಆರ್‍.ವಿ.ಕೆ. ಉತ್ತರ ಪ್ರಾಂತದ ಶಿಕ್ಷಕರ ಪ್ರಾರಂಭಿಕ ಪ್ರವೇಶಾತಿ ಶಿಬಿರವನ್ನು ಉದ್ಘಾಟಿಸಲಾಯಿತು. ಶಿಬಿರವು 5 ದಿನಗಳ ಕಾಲ ನಡೆಯಲಿದ್ದು, ಮೇ 18ರಂದು ಮುಕ್ತಾಯಗೊಳ್ಳಲಿದೆ. ಉದ್ಘಾಟನಾ ಸಮಾರಂಭದಲ್ಲಿ ಆರ್‍.ವಿ.ಕೆ. ಸಮೂಹದ ಆಡಳಿತ ಪ್ರಮುಖರಾದ ಶ್ರೀ ಮಹೇಶ್ವರಯ್ಯ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯ ಕರೆಸ್ಪಾಂಡೆಂಟ್, ಶ್ರೀ ವಿನಯ್ ಸಿಂಹ, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ದಾವಣಗೆರೆಯ ಕಾರ್ಯದರ್ಶಿಗಳಾದ ಶ್ರೀ ಜಯಣ್ಣ ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀ ರಂಗನಾಥ ಅವರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಶ್ರೀ ಜಯಣ್ಣ ಅವರು ಶಿಕ್ಷಕರನ್ನುದ್ದೇಶಿಸಿ “ಶಿಕ್ಷಕರಲ್ಲಿ ಅಧ್ಯಯನ ಪ್ರವೃತ್ತಿ ಹಾಗೂ ಶ್ರದ್ಧೆ ಇರಬೇಕು. ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಬೇಕು” ಎನ್ನುತ್ತಾ ರಾಷ್ಟ್ರೋತ್ಥಾನ ಪರಿಷತ್‍ನ ಪರಿಚಯ ಮಾಡಿಕೊಟ್ಟರು.

Scroll to Top