RVK North Cluster Teacher Training Workshop inaugurated in RVK - HB Halli
May 16: Teacher Training Workshop for the teachers of RVK North Cluster was inaugurated in Rashtrotthana Vidya Kendra – Hagaribommanahalli. Camp is scheduled for 3 days and concludes on May 18th.
ಮೇ 16: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯಲ್ಲಿ ಆರ್.ವಿ.ಕೆ. ಉತ್ತರ ಪ್ರಾಂತದ ಶಿಕ್ಷಕರ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಲಾಯಿತು. ಶಿಬಿರವು 3 ದಿನಗಳ ಕಾಲ ನಡೆಯಲಿದ್ದು, ಮೇ 18ರಂದು ಮುಕ್ತಾಯಗೊಳ್ಳಲಿದೆ.
ಉದ್ಘಾಟನಾ ಸಮಾರಂಭದಲ್ಲಿ ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಗರಿಬೊಮ್ಮನಹಳ್ಳಿಯ ಕಾರ್ಯದರ್ಶಿಗಳಾದ ಶ್ರೀ ಬಸವನಗೌಡರು, ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಧಾರವಾಡದ ಪ್ರಾಂಶುಪಾಲರಾದ ಶ್ರೀಮತಿ ಅನಿತಾ ರೈ ಹಾಗೂ ಶಾಲೆಯ ಪ್ರಾಂಶುಪಾಲರಾದ ಶ್ರೀ ರಂಗನಾಥ ಅವರು ಉಪಸ್ಥಿತರಿದ್ದರು.
ಶ್ರೀ ಬಸವನಗೌಡರು ಶಿಕ್ಷಕರನ್ನುದ್ದೇಶಿಸಿ ಶಿಕ್ಷಕರಲ್ಲಿ ಸಕಾರಾತ್ಮಕ ಚಿಂತನೆ ಇದ್ದು, ಮಕ್ಕಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಬೇಕು ಎಂದರು. ರಾಷ್ಟ್ರೋತ್ಥಾನ ಪರಿಷತ್ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ ದಿನೇಶ್ ಹೆಗ್ಡೆಯವರು ರಾಷ್ಟ್ರೋತ್ಥಾನ ಪರಿಷತ್ನ ಮೌಲ್ಯವಾಗಿ ಬದ್ಧತೆ ವಿಷಯದ ಕುರಿತು ಚರ್ಚಿಸಿದರು. ಬೋಧನಾ ವಿಧಾನಗಳು ವಿಷಯದ ಕುರಿತು ಸಂವಿತ್ ಸಂಶೋಧನಾ ಪ್ರತಿಷ್ಠಾನದ ನಿರ್ದೇಶಕರಾದ ಶ್ರೀ ಸುಬ್ರಹ್ಮಣ್ಯ ಅವರು ವಿಷಯ ಮಂಡಿಸಿದರು.