Bharata Bharati books distributed to Govt Schools by RVK - Arkavathy

Bengaluru, July 25: Books were distributed to 3 Govt School Libraries as a part of literature campaign by Seva Prakalpa of Rashtrotthana Vidya Kendra – Arkavathy. 100 Bharata Bharati books were given to each school with a view to tell the life history of freedom fighters through stories to the school students.

ಬೆಂಗಳೂರು, ಜುಲೈ 25: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಅರ್ಕಾವತಿಯ ಸೇವಾ ಪ್ರಕಲ್ಪದ ವತಿಯಿಂದ ಸಾಹಿತ್ಯ ಪ್ರಚಾರದ ಭಾಗವಾಗಿ 3 ಸರ್ಕಾರಿ ಶಾಲಾ ಗ್ರಂಥಾಲಯಗಳಿಗೆ ಪುಸ್ತಕ ವಿತರಣೆ ಮಾಡಲಾಯಿತು.ಶಾಲಾ ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯನ್ನು ಕಥೆಗಳ ಮೂಲಕ ತಿಳಿಸುವ ದೃಷ್ಟಿಯಿಂದ ಪ್ರತಿ ಶಾಲೆಗೂ100 ಭಾರತ ಭಾರತಿ ಪುಸ್ತಕಗಳನ್ನು ನೀಡಲಾಯಿತು.
ಶಾಲೆಯ ಆಡಳಿತಾಧಿಕಾರಿಗಳಾದ ಶ್ರೀ ನಿಖಿಲ್ ಪಾಟೀಲ್ ಜಿ ಮತ್ತು ಶಾಲಾ ಸೇವಾ ಪ್ರಮುಖರಾದ ಶ್ರೀ ಮಂಜುನಾಥ ಅವರು ಉಪಸ್ಥಿತರಿದ್ದು, ಮಕ್ಕಳಲ್ಲಿ ರಾಷ್ಟ್ರಭಕ್ತಿ ಹಾಗೂ ರಾಷ್ಟ್ರಪುರುಷರ ಚರಿತ್ರೆ ಮತ್ತು ಅವರು ದೇಶಕ್ಕೆ ನೀಡಿದ ಕೊಡುಗೆಗಳ ಬಗೆಗೆ ಮಕ್ಕಳಿಗೆ ತಿಳಿಯಬೇಕು ಮತ್ತು ಓದುವ ಹವ್ಯಾಸವನ್ನು ಹೆಚ್ಚಿಸುವ ಸಲುವಾಗಿ ಈ ಒಂದು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು.

Scroll to Top