State Level Best Teacher Award to RVK Teacher, Sri Nandish B
Bengaluru, Sept 28: Sri Nandish B, a Kannada teacher serving in Rashtrotthana Vidya Kendra – Vijayanagar, Mysore, has been felicitated with the State Level Best Teacher Award by the Karnataka State Private School Teachers Association (R).
ಆರ್.ವಿ.ಕೆ. ಕನ್ನಡ ಶಿಕ್ಷಕ, ಶ್ರೀ ನಂದೀಶ್ ಬಿ ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಭಾಜನರಾಗಿದ್ದಾರೆ. ರಾಷ್ಟ್ರೋತ್ಥಾನ ಪರಿವಾರದ ಸಮಸ್ತರಿಂದ ಹಾರ್ದಿಕ ಅಭಿನಂದನೆಗಳು.
ಬೆಂಗಳೂರು, ಸಪ್ಟೆಂಬರ್ 28: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ವಿಜಯನಗರ, ಮೈಸೂರಿನಲ್ಲಿ ಸೇವೆ ಸಲ್ಲಿಸುತ್ತಿರುವ ಕನ್ನಡ ಶಿಕ್ಷಕರಾದ ಶ್ರೀ ನಂದೀಶ್ ಬಿ ಅವರಿಗೆ ಕರ್ನಾಟಕ ರಾಜ್ಯ ಖಾಸಗಿ ಶಾಲಾ ಶಿಕ್ಷಕರ ಸಂಘ (ರಿ) ರಾಜ್ಯಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ, ಸನ್ಮಾನಿಸಿತು. ಇಲ್ಲಿನ ಜ್ಞಾನಭಾರತಿ ವಿಶ್ವವಿದ್ಯಾಲಯದ ಆವರಣದಲ್ಲಿರುವ ಪ್ರೊ॥ ಕೆ ವೆಂಕಟಗಿರಿಗೌಡ ಸ್ಮಾರಕ ಸಭಾಂಗಣದಲ್ಲಿ ಶ್ರೀ ನಂದೀಶ್ ಅವರ 19 ವರ್ಷಗಳ ಶೈಕ್ಷಣಿಕ ಸೇವೆ ಹಾಗೂ ಸಾಧನೆಗಳನ್ನು ಪರಿಗಣಿಸಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ, ಗೌರವಿಸಲಾಯಿತು.
ಶ್ರೀ ನಂದೀಶ್ ಅವರ ಸಾಧನೆಗಳು:
• 19 ವರ್ಷಗಳ ಬೋಧನಾ ವೃತ್ತಿಯಲ್ಲಿ ನಿರಂತರ 100% ಫಲಿತಾಂಶ.
• ಪ್ರಾರಂಭದ 7 ವರ್ಷಗಳ ಕಾಲ ನಿರಂತರವಾಗಿ ರಾಜ್ಯ ಪಠ್ಯಕ್ರಮದ ಶಾಲೆಗಳಲ್ಲಿ ಹಲವು ವಿದ್ಯಾರ್ಥಿಗಳಿಗೆ 125ಕ್ಕೆ 125 ಅಂಕ ಹಾಗೂ ಉಳಿದ ವಿದ್ಯಾರ್ಥಿಗಳಿಗೆ 125ಕ್ಕೆ 100ಕ್ಕಿಂತ ಹೆಚ್ಚಿನ ಅಂಕಗಳು.
• ನಂತರದ 11 ವರ್ಷಗಳ ಕಾಲ ಸಿ.ಬಿ.ಎಸ್.ಇ ಶಾಲೆಯಲ್ಲಿಯೂ 100ಕ್ಕೆ 90ಕ್ಕಿಂತ ಕಡಿಮೆ ಇಲ್ಲದಂತೆ ಅಂಕಗಳನ್ನು ಪಡೆಯಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ.
• ವಿದ್ಯಾರ್ಥಿಗಳಲ್ಲಿ ಕನ್ನಡ ಭಾಷಾಭಿಮಾನ ಮತ್ತು ಸಾಹಿತ್ಯಾಸಕ್ತಿ ಮೂಡಿಸುವಲ್ಲಿನ ಪರಿಶ್ರಮಕ್ಕಾಗಿ ತರೀಕೆರೆಯ ಕೀರ್ತಿ ಪ್ರಕಾಶನದಿಂದ ಕನ್ನಡ ಕಣ್ಮಣಿ ಎಂಬ ಬಿರುದು, 2007ರಲ್ಲಿ.
• ಹದಿನಾರು (ನಂಬಿಹ) ಎಂಬ ಹೆಸರಿನಲ್ಲಿ ದಿನ ಪತ್ರಿಕೆಗಳು ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಹಲವು ವೈಚಾರಿಕ ಲೇಖನಗಳು, ಕವನಗಳ ಪ್ರಕಟಣೆ.
• ಆಧುನಿಕ ವಚನಗಳು, ಸಣ್ಣಕಥೆಗಳು, ಚುಟುಕುಗಳು, ಜಪಾನಿನ ಪ್ರಸಿದ್ಧ ಸಾಹಿತ್ಯ ಪ್ರಕಾರಗಳಾದ ಹಾಯ್ಕು, ಟಂಕಾ ಹಾಗೂ ಪರ್ಶಿಯಾದ ಸಾಹಿತ್ಯ ಪ್ರಕಾರಗಳನ್ನು ಹೋಲುವ ಕೆಲವು ಕನ್ನಡ ರುಬಾಯಿಗಳ ರಚನೆ.