RVK – Hassan Office Inauguration in Krishna Nagar

For Pre-KG to 6th Std Online Registrations will start on 12th Oct 2024, Vijayadashami Day – https://hassan.rvkcbse.in/
Hassan, Aug 31: Office of the RVK – Hassan was inaugurated herein Krishna Nagar of BT Koppal. It is the 15th School of Rashtrotthana Vidya Kendra CBSE Schools Group which will be opened in the year 2025-26.Pujya Sri Nandishwara Shivacharya Mahaswamiji, Mathadhipati and Dharmadarshi of Male Malleshwara Betta; Sri Dhanpal, Chairman, Hassan Dist Chamber of Commerce & Industries; Sri N Dinesh Hege, General Secretary of Rashtrotthana Parishat; and many more dignitaries were present.Pujya Sri Nandishwara Shivacharya Mahaswamiji, apart from appreciating the active involvement of the Rashtrotthana Parishat in building healthy and sustainable society, expressed appreciation for the education, health and service activities undertaken by the Parishat to save the real history, culture and heritage of India.Rashtrotthana Vidya Kendra CBSE Schools Group is operating 14 Schools across Karnataka and next year, 2025-26, 3 New Schools will start in Hassan, Udupi and Hangal.Inauguration of the well-equipped school building is planned in March 2025, starting from Pre-primary to class 6th in May and gradually expanding to class 10 in subsequent years.

ರಾಷ್ಟ್ರೋತ್ಥಾನ ವಿದ್ಯಾಕೇಂದ್ರ – ಹಾಸನದ ಕಾರ್ಯಾಲಯ ಉದ್ಘಾಟನೆ ಕೃಷ್ಣ ನಗರದಲ್ಲಿ.
ಹಾಸನ, ಆಗಸ್ಟ್ 31: ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲೆಗಳ ಸಮೂಹದ 15ನೇ ಶಾಲೆಯು 2025-26ನೇ ಸಾಲಿನಲ್ಲಿ ಇಲ್ಲಿನ ಬಿ.ಟಿ. ಕೊಪ್ಪಲಿನ ಕೃಷ್ಣ ನಗರದಲ್ಲಿ ಕಾರ್ಯಾರಂಭ ಮಾಡಲಿದ್ದು, ಈ ದಿನ ಶಾಲೆಯ ಕಾರ್ಯಾಲಯವನ್ನು ಉದ್ಘಾಟಿಸಲಾಯಿತು. ಮಲೆ ಮಲ್ಲೇಶ್ವರ ಬೆಟ್ಟದ ಮಠಾಧಿಪತಿಗಳು ಹಾಗೂ ಧರ್ಮದರ್ಶಿಗಳಾದ ಪೂಜ್ಯ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಹಾಸನ ಜಿಲ್ಲೆಯ ಚೇಂಬರ್‌ ಆಫ್ ಕಾಮರ್ಸ್‌ ಅಂಡ್ ಇಂಡಸ್ಟ್ರೀಸ್‌ನ ಅಧ್ಯಕ್ಷರಾದ ಶ್ರೀ ಧನಪಾಲ್, ರಾಷ್ಟ್ರೋತ್ಥಾನ ಪರಿಷತ್‌ನ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ನಾ. ದಿನೇಶ್ ಹೆಗ್ಡೆ ಮೊದಲಾದ ಗಣ್ಯರು ಉಪಸ್ಥಿತರಿದ್ದರು.ಪೂಜ್ಯ ಶ್ರೀ ನಂದೀಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ರಾಷ್ಟ್ರೋತ್ಥಾನ ಪರಿಷತ್ ಸ್ವಸ್ಥ-ಸುಸ್ಥಿರ ಸಮಾಜನಿರ್ಮಾಣಕ್ಕಾಗಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಶ್ಲಾಘಿಸಿದರಲ್ಲದೇ, ಭಾರತದ ನೈಜ ಇತಿಹಾಸ, ಸಂಸ್ಕೃತಿ, ಪರಂಪರೆಗಳನ್ನು ಉಳಿಸುವ ನಿಟ್ಟಿನಲ್ಲಿ ಪರಿಷತ್‌ ಕೈಗೆತ್ತಿಕೊಂಡಿರುವ ಶಿಕ್ಷಣ, ಆರೋಗ್ಯ, ಸೇವಾ ಚಟುವಟಿಕೆಗಳ ಬಗೆಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.ರಾಷ್ಟ್ರೋತ್ಥಾನ ವಿದ್ಯಾಕೇಂದ್ರ ಸಿ.ಬಿ.ಎಸ್.ಇ. ಶಾಲೆಗಳ ಸಮೂಹದ 14 ಶಾಲೆಗಳು ಕರ್ನಾಟಕ ರಾಜ್ಯಾದ್ಯಂತ ಈಗಾಗಲೇ ಕಾರ್ಯನಿರ್ವಹಿಸುತ್ತಿದ್ದು, ಬರುವ ಸಾಲು, 2025-26ರಿಂದ ಹಾಸನ, ಉಡುಪಿ ಹಾಗೂ ಹಾನಗಲ್‌ನಲ್ಲಿ 3 ಹೊಸ ಶಾಲೆಗಳು ಪ್ರಾರಂಭವಾಗಲಿವೆ.2025ರ ಮಾರ್ಚ್‌‌ನಲ್ಲಿ ಸುಸಜ್ಜಿತ ಶಾಲಾ ಕಟ್ಟಡದ ಉದ್ಘಾಟನೆಯನ್ನು ಯೋಜಿಸಿದ್ದು, ಮೇ ತಿಂಗಳಿನಲ್ಲಿ ಪೂರ್ವ ಪ್ರಾಥಮಿಕದಿಂದ 6ನೇ ತರಗತಿಯನ್ನು ಪ್ರಾರಂಭಿಸಿ, ನಂತರದ ವರ್ಷಗಳಲ್ಲಿ ಹಂತಹಂತವಾಗಿ 10ನೇ ತರಗತಿಗೆ ವಿಸ್ತರಿಸಲಾಗುವುದು.

Scroll to Top